JavaScript seems to be disabled in your browser. For the best experience on our site, be sure to turn on Javascript in your browser.
ಈ ಸಂಪನ್ಮೂಲಗಳನ್ನು ನಮ್ಮ ಮಿನಿಸ್ಟ್ರಿಯ ಪಾಲುದಾರರು ಅನುವಾದಿಸಿದ್ದಾರೆ. ನಾವು ಈ ಸಂಪನ್ಮೂಲಗಳನ್ನು ನಿಮಗೆ ಉಚಿತವಾಗಿ ಒದಗಿಸುತ್ತೇವೆ ಮತ್ತು ಇವುಗಳ ಕುರಿತು ನೀವು ಇತರರಿಗೂ ತಿಳಿಸಬೇಕೆಂದು ಕೋರುತ್ತೇವೆ. ಇದರಿಂದ, ಅವರೂ ಸಹ ನಮ್ಮ ವೆಬ್ These resources have been translated by our ministry partners. We provide these resources to you for free and ask that you would let others know, so they too can download translated resources for free from our website.
ಈ ಸಂಪನ್ಮೂಲಗಳನ್ನು ನಮ್ಮ ಮಿನಿಸ್ಟ್ರಿಯ ಪಾಲುದಾರರು ಅನುವಾದಿಸಿದ್ದಾರೆ. ನಾವು ಈ ಸಂಪನ್ಮೂಲಗಳನ್ನು ನಿಮಗೆ ಉಚಿತವಾಗಿ ಒದಗಿಸುತ್ತೇವೆ ಮತ್ತು ಇವುಗಳ ಕುರಿತು ನೀವು ಇತರರಿಗೂ ತಿಳಿಸಬೇಕೆಂದು ಕೋರುತ್ತೇವೆ. ಇದರಿಂದ, ಅವರೂ ಸಹ ನಮ್ಮ ವೆಬ್
These resources have been translated by our ministry partners. We provide these resources to you for free and ask that you would let others know, so they too can download translated resources for free from our website.
Truth78 ಎಂಬುದು ಮುಂದಿನ ಪೀಳಿಗೆಯವರು ದೇವರ ಕುರಿತು ಅರಿತುಕೊಳ್ಳಲು, ಗೌರವಿಸಲು ಮತ್ತು ಶ್ರದ್ಧಾಭಕ್ತಿಗಳಿಂದ ಕಾಣಲು ನೆರವಾಗುವ, ದೂರದೃಷ್ಟಿಯುಳ್ಳ ಮಿನಿಸ್ಟ್ರಿಯಾಗಿದೆ. ಇದು ಅವರ ಭರವಸೆಯನ್ನು ಕೇವಲ ಏಸುಕ್ರಿಸ್ತನ ಮೇಲೆ ಸ್ಥಾಪಿಸಿ, ಅವರು ದೇವರ ಮಹಿಮೆಯನ್ನು ಸಾರುವ ನಿಷ್ಠಾವಂತ ಅನುಯಾಯಿಗಳಾಗಿ ಬಾಳುವಂತೆ ಮಾಡುತ್ತದೆ.
ದೇವರ ಸಂಪೂರ್ಣ ಮಾರ್ಗದರ್ಶನವನ್ನು ಸಾರುವ ಮೂಲಕ, ಮನಸ್ಸಿಗೆ ಸೂಚನೆ ನೀಡುವ, ಹೃದಯವನ್ನು ತೊಡಗಿಸಿಕೊಳ್ಳುವ ಹಾಗೂ ಸಂಕಲ್ಪಶಕ್ತಿಯ ಮೇಲೆ ಪ್ರಭಾವ ಬೀರುವ ಸಂಪನ್ಮೂಲಗಳು ಹಾಗೂ ತರಬೇತಿಯನ್ನು ಚರ್ಚ್ ಹಾಗೂ ಮನೆಯಲ್ಲಿ ಒದಗಿಸಿ, ಮುಂದಿನ ಪೀಳಿಗೆಯ ನಂಬಿಕೆಯನ್ನು ಪೋಷಿಸುವುದೇ ನಮ್ಮ ಧ್ಯೇಯವಾಗಿದೆ.
ದೇವರ ಮೇಲೆ ಕೇಂದ್ರಿತವಾಗಿರುವ, ಬೈಬಲ್ ಅನ್ನು ಪೂರ್ತಿಯಾಗಿ ಅಳವಡಿಸಿಕೊಂಡಿರುವ, ಸುವಾರ್ತೆಯ ಮೇಲೆ ಕೇಂದ್ರೀಕರಿಸಿರುವ, ಏಸುಕ್ರಿಸ್ತನನ್ನು ಕೊಂಡಾಡುವ, ಪವಿತ್ರಾತ್ಮವನ್ನು ಆಧರಿಸಿರುವ, ಸೈದ್ಧಾಂತಿಕ ನೆಲೆಗಟ್ಟು ಹೊಂದಿರುವ ಮತ್ತು ಅನುಯಾಯಿಗಳಾಗಿಸುವ ಗುರಿ ಹೊಂದಿರುವ ಸಂಪನ್ಮೂಲಗಳನ್ನು ನಾವು ಅಭಿವೃದ್ಧಿಪಡಿಸುತ್ತೇವೆ. ಮಕ್ಕಳು ಹಾಗೂ ಯುವಜನರಿಗೆ, ಚರ್ಚ್, ಮನೆ ಮತ್ತು ಇಗರ್ಜಿ ಶಾಲೆಗಳಲ್ಲಿ ಸಂಪೂರ್ಣ ಬೈಬಲ್ ಅನ್ನು ಕಲಿಸಲು, ನಮ್ಮ ಬಳಿ ವಿವಿಧ ಸಾಮಗ್ರಿಗಳಿವೆ; ಮತ್ತು ಅವರನ್ನು ಸಜ್ಜುಗೊಳಿಸಲು ಹಾಗೂ ಪ್ರೋತ್ಸಾಹಿಸಲು, ಪೋಷಕರಿಗಾಗಿ ನಾವು ವಿಷಯಾಧಾರಿತ ಪುಸ್ತಕಗಳನ್ನು ಒದಗಿಸುತ್ತೇವೆ.
ಹೆಚ್ಚುವರಿ ಸಂಪನ್ಮೂಲಗಳನ್ನು ಅನುವಾದಿಸಲು ನಿಮಗೆ ಆಸಕ್ತಿಯಿದ್ದರೆ ಅಥವಾ ನಮ್ಮ ಸಂಪನ್ಮೂಲಗಳ ಕುರಿತು ಅಥವಾ ಅವುಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ನಿಮಲ್ಲಿ ಪ್ರಶ್ನೆಗಳಿದ್ದರೆ, ದಯವಿಟ್ಟು [email protected] ಗೆ ಇಮೇಲ್ ಕಳುಹಿಸಿ. ಅನುವಾದಕರ ಸಹಾಯದಿಂದ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮಿಂದಾದಷ್ಟು ಪ್ರಯತ್ನವನ್ನು ಮಾಡುತ್ತೇವೆ.
ನಿಮ್ಮ ಕುಟುಂಬ, ಚರ್ಚ್, ಶಾಲೆ, ಅಥವಾ ಮಿನಿಸ್ಟ್ರಿಗಳಿಗಾಗಿ ಈ ಸಾಮಗ್ರಿಗಳನ್ನು ಮುದ್ರಿಸಲು ಮತ್ತು ಬಳಸಲು Truth78 ಅನುಮತಿ ನೀಡುತ್ತದೆ. ನಿಮ್ಮ ಸಂಸ್ಥೆ ಅಥವಾ ಕುಟುಂಬದ ಹೊರಗೆ ನೀವು ಇದನ್ನು ವಿತರಿಸಬಾರದು, ಅಥವಾ ಲಾಭಕ್ಕಾಗಿ ಮಾರಾಟ ಮಾಡಬಾರದು. ಆದರೆ ಇತರರಿಗೆ ನಮ್ಮ ವೆಬ್ಸೈಟ್ಗೆ ಬರಲು ನಿರ್ದೇಶಿಸಿ ಇದರಿಂದ ಅವರು ತಮ್ಮದೇ ಆದ ಡೌನ್ಲೋಡ್ಗಳನ್ನು ಪಡೆದುಕೊಳ್ಳಬಹುದು.
ಏಸುಕ್ರಿಸ್ತನ ಕುರಿತಾದ ನೀತಿಕಥೆಗಳು, ಮಹಿಮಾನ್ವಿತವಾದ, ಜೀವನದ ದಿಕ್ಕನ್ನೇ ಬದಲಾಯಿಸುವ ಸತ್ಯವನ್ನು ಒಳಗೊಂಡಿರುತ್ತವೆ. ಆದರೆ, ಕಣ್ಣಿದ್ದೂ ಕುರುಡರಾಗಿರುವವರಿಗೆ ಮತ್ತು ದೇವರಿಂದ ವಿಮುಖರಾಗಿರುವವರಿಗೆ ದೇವರ ಸತ್ಯದ ಸೌಂದರ್ಯ ಹಾಗೂ ಮೌಲ್ಯವು ಗೋಚರಿಸುವುದಿಲ್ಲ. ದೇವರ ಸಾಮ್ರಾಜ್ಯದ ನೀತಿಕಥೆಗಳ ಕುರಿತಾದ ಈ ಅಧ್ಯಯನವು, ಆಧ್ಯಾತ್ಮ ದೃಷ್ಟಿ ಹಾಗೂ ತುಂಬುಹೃದಯದ ಮೂಲವೇ ದೇವರು ಎನ್ನುವುದನ್ನು ಸಾರಿ ಹೇಳುತ್ತದೆ. ಮಕ್ಕಳಲ್ಲಿ ಆಧ್ಯಾತ್ಮದ ಆಸಕ್ತಿಯನ್ನು ಜಾಗೃತಗೊಳಿಸುವುದೇ ಈ ಪಠ್ಯಕ್ರಮದ ಗುರಿಯಾಗಿದೆ. ಇದರಿಂದ, ಅವರು ದೇವರೆಂಬ ಗೌಪ್ಯ ನಿಧಿಯನ್ನು ಹುಡುಕುತ್ತಾ, ತಮ್ಮ ತೃಪ್ತಿಯನ್ನು ದೇವರಲ್ಲಿ ಕಂಡುಕೊಳ್ಳಬಹುದು. ಗೌಪ್ಯ ಸಂಗತಿಗಳು ಎಂಬುದು ಬೇಸಿಗೆ ಕಾಲದ ಬೈಬಲ್ ಶಾಲೆಯಲ್ಲಿ ಕಲಿಸಲು ಅತ್ಯಂತ ಸೂಕ್ತವಾಗಿದೆ.
ಡೌನ್ಲೋಡ್ ಮಾಡಲು ಫೈಲ್ಗಳು ಲಭ್ಯವಿದೆ
Loading...